ಬುಧವಾರ, ಮಾರ್ಚ್ 5, 2014

ಪ್ರೀತಿ ಸಿಗೋದ್ ಕಷ್ಟ... maintain ಮಾಡಿ ಉಳಿಸ್ಕೊಳ್ರೋ... ಕಾಮಿಡಿ ಟೈಂ ಗಣೇಶಂದ್ರಾ...!!!


ನಮಸ್ಕಾರ... ನಮಸ್ಕಾರ... ನಮಸ್ಕಾರ... ನಾನು ಪೂರ್ಣಚಂದ್ರ... and I am back...!!! "ಪ್ರೇಮದಲ್ಲಿ ಬಗ್ನೀಗೂಟ ಹೊಡೆಸಿಕೊಂಡವನೇ... ಭಗ್ನ ಪ್ರೇಮಿ..." ಅನ್ನೋ ಕಿತ್ಹೋದ್ ಕವಿತೆ ಬರೆದಿದ್ದೆ... Straight ಆಗಿ ವಿಷಯಕ್ಕೆ ಬರ್ತೀನಿ.... "ಪ್ರೇಮ ಗೀಮ ಜಾನೇ ದೋ, ಎಲ್ಲಾ ಮಾಯವೋ..." ಅನ್ನುವ ರೀತಿಯಲ್ಲಿ, "ಈ ಪ್ರೀತಿ, ಪ್ರೇಮ ಅನ್ನೋದೆಲ್ಲಾ, ಖಂಡಿತವಾಗಿಯೂ ಪುಸ್ತಕದ ಬದನೇಕಾಯಿ..." ನಿಜ... "ಇಲ್ಲಾ...!!!! ಈ ಪ್ರೀತಿ ಅನ್ನೋದು ಈ ದುನಿಯಾನಲ್ಲಿ ಇದೇ..." ಅಂತ ಹೋರಾಟ ಮಾಡೋರು ದಯವಿಟ್ಟು ಹೋಗಿ "ಪೋಗೋ" ನೋಡಿ...
ಕೆಲವೊಂದು ವಿಷಯಗಳು ಎಲ್ಲರೂ ತಿಳ್ಕೋಬೇಕಾಗಿರೋದು...
1. ಹೃದಯದಲ್ಲಿ "ಪ್ರೀತಿ, ಭಾವನೆ..." ಇತ್ಯಾದಿ ಯಾವುದೂ ಇರಲ್ಲ... ಇರೋದು ರಕ್ತ... ಬೇಕಾದ್ರೆ ಚಾಕು ಹಾಕ್ಕೊಂಡ್ ಎದೆ ಬಗೆದುಕೊಂಡು ಚೆಕ್ ಮಾಡ್ಕೊಳಿ...
2. "ಪ್ರೀತಿ" ಅನ್ನೋ ಫೀಲಿಂಗ್ ಮೆದುಳಲ್ಲಿ ಆಗುವ, "ಕೆಮಿಕಲ್ ಲೋಚಾ..." ಅನ್ನುವ ಪ್ರಕ್ರಿಯೆ...
(Studies in neuroscience have involved chemicals that are present in the brain and might be involved when people experience love. These chemicals include: nerve growth factor, testosterone, estrogen, dopamine, norepinephrine, serotonin, oxytocin, and vasopressin. Adequate brain levels of testosterone seem important for both human male and female sexual behavior. Dopamine, norepinephrine, and serotonin are more commonly found during the attraction phase of a relationship. Oxytocin and vasopressin seemed to be more closely linked to long term bonding and relationships characterized by strong attachments.

The conventional view in biology is that there are two major drives in love — sexual attraction and attachment. Attachment between adults is presumed to work on the same principles that lead an infant to become attached to his or her mother or father– or both.

The chemicals triggered that are responsible for passionate love and long-term attachment love seem to be more particular to the activities in which both persons participate rather than to the nature of the specific people involved.  ವಿಕಿಪೀಡಿಯ...)
ಪ್ರೀತಿ ಎಂದೆಂದಿಗೂ ಅಮರವಾಗಿ ಉಳಿಯೋಕ್ಕೂ ಮೆದುಳಲ್ಲಿರೋ ಒಂದು ಕೆಮಿಕಲ್ ಕಾರಣ... ಉದಾ: ದೇವದಾಸ್... ಇತ್ಯಾದಿ... ಹೀಗೆ ಕಡಿಮೆ ಸಮಯ ಉಳಿಯುವುದಕ್ಕೆ, ಪ್ರೀತಿಯೇ ಹುಟ್ಟದೆಯಿರುವುದಕ್ಕೆ, ಎಲ್ಲದಕ್ಕೂ ಮೆದುಳಲ್ಲಿನ ಕೆಮಿಕಲ್ಗಳು ತಮ್ಮನ್ನೇ ತಾವು ಗೊಟಾಯಿಸಿಕೊಂಡು ಕಾಕ್ ಟೇಲ್ ಮಾಡಿಕೊಳ್ಳುವುದೇ ಕಾರಣ... "ಗೊಂಬೆ ಆಟವಯ್ಯ... ನೀ ಸೂತ್ರಧಾರಿ... ನಾ ಪಾತ್ರಧಾರಿ..." ಎನ್ನುವಂತೆ... ನಮ್ಮ ಮೆದುಳಲ್ಲಿರುವ ಕೆಮಿಕಲ್ಗಳು ನಮ್ಮನ್ನು "ಹಾಲಲ್ಲಾದರೂ ಸರಿ, ನೀರಲ್ಲಾದರೂ ಸರಿ..." ಎತ್ತಿ ಒಗೆದುಬಿಡುತ್ತದೆ...

ಇದಕ್ಕೆ Sherlock Holmes ಸರಿಯಾಗಿ ಹೇಳಿದ್ದಾರೆ... "Emotion is the enemy of reason..." ಹೀಗೆ ಮನುಷ್ಯ ಭಾವಪರವಶನಾಗಿ ಲವ್ ಆದರೂ ಮಾಡಲೀ... ಹೇಟ್ ಆದರೂ ಮಾಡಲೀ.. ಏಟ್ ಆದರೂ ಹಾಕಲೀ... (ಥೂ ಥೂ ಥೂ ಕಂಟ್ರೋಲ್... ಕಂಟ್ರೋಲ್...) ಅವನಿಗೆ ಖಾಯಂ ಆಗುವುದು ಒಂದೇ ಟೈಟಲ್... "Emotional fool..."

Agent Smith: I'd like to share a revelation that I've had during my time here. It came to me when I tried to classify your species and I realized that you're not actually mammals. Every mammal on this planet instinctively develops a natural equilibrium with the surrounding environment but you humans do not. You move to an area and you multiply and multiply until every natural resource is consumed and the only way you can survive is to spread to another area. There is another organism on this planet that follows the same pattern. Do you know what it is? A virus. Human beings are a disease, a cancer of this planet. You're a plague and we are the cure. (ಮೇಟ್ರಿಕ್ಸ್ ಚಿತ್ರದಿಂದ)

ಸತ್ಯ ಸಂಗತಿಯೇನೆಂದರೆ ಮನುಷ್ಯ ಈ ಭೂಮಿಗೆ ಭಾರವಾಗಿರುವ ಒಂದು ಕ್ರಿಮಿ... ಕ್ರಿಮಿಗಳು ಎಂದರೆ ಅವಕ್ಕೆ ಬಹಳ ಅವಮಾನ ಮಾಡಿದ ಹಾಗೆ ಆಗುತ್ತದೆ... ಇತ್ತೀಚೆಗೆ ವಿಜ್ಞಾನಿಗಳು ಕಂಡುಹಿಡಿದಿರುವ ಪ್ರಕಾರ, ಜಗತ್ತಿನ ಕ್ರಿಮಿ ಕೀಟಗಳೆಲ್ಲಾ ನಾಶವಾದ ಪಕ್ಷದಲ್ಲಿ ಈ ಭೂಮಿಯಲ್ಲಿ ಮುಂಬರುವ ಐವತ್ತು ವರ್ಷಗಳ ಒಳಗೆ ಪ್ರಳಯವಾಗಿಬಿಡುತ್ತದೆ... ಆದರೆ ಇಡೀ ಮನುಕುಲವೇ ನಶಿಸಿಹೋದರೆ, ಮುಂಬರುವ ಐವತ್ತು ವರ್ಷಗಳಲ್ಲಿ ಭೂಮಿ ಎಂದೂ ಕೇಳರಿಯದ ವೈಭವದ ಮಟ್ಟಕ್ಕೆ ಬೆಳೆಯುತ್ತದೆ...

ಹಾಗೆ ಹೇಳಬೇಕೆಂದರೆ ಮನುಷ್ಯನಿಗೆ ನಿಜವಾದ ಆನಂದ, ಸುಖ ಏನೆಂಬುದು ಯಾವತ್ತಿಗೂ ಗೊತ್ತಾಗುವುದಿಲ್ಲ...
ಹಂದಿಯನ್ನು ತೆಗೆದುಕೊಳ್ಳೋಣ... ಅದು ಕೊಳಚೆಯಲ್ಲಿ ಸುಖವಾಗಿ ಒದ್ದಾಡುತ್ತಿರುವಾಗ ಬ್ರಹ್ಮಾನಂದದ ಅನುಭೂತಿ ಪಡೆಯುತ್ತಿರುತ್ತದೆ... ಅಂತಹ ಆನಂದ ಮನುಷ್ಯರಿಗೆ ಯಾವತ್ತೂ ಅನುಭವಕ್ಕೆ ಬರುವುದಿಲ್ಲ... ಅದಕ್ಕಿರುವ ಆ ಅಗಾಧವಾದ ಗರ್ಭಶಕ್ತಿ ಮನುಷ್ಯರಿಗಿಲ್ಲ... ನಾಯಿಗಿರುವ ವಾಸನಾಗ್ರಹಣ ಶಕ್ತಿ ನಮ್ಮ ಮೂಗಿಗಿಲ್ಲ... ಕತ್ತಲಲ್ಲೂ ಬಾವುಲಿ ಕಣ್ಣಿಲ್ಲದೆ ಹಾರುತ್ತದೆ... ಕತ್ತಲಲ್ಲಿ ನಮಗೆ ಕಣ್ಣಿದ್ದೂ ಪ್ರಯೋಜನವಿಲ್ಲ... ಹಂದಿ ಒಂದೇ ಅಲ್ಲ... ಮನುಷ್ಯ ತಾನು ಈ ಭೂಮಿಯಲ್ಲಿರುವ ಯಾವುದೇ ಪ್ರಾಣಿಗಳಿಗೆ ಹೋಲಿಸಿದರೆ ಬಹಳ ತುಚ್ಛ ಸ್ಥಾನದಲ್ಲಿದ್ದಾನೆ...

"ಇಲ್ಲಾ... ನಮಗೆ ದೇವರು ಮೆದುಳು ನೀಡಿದ್ದಾನೆ..." ಶೀಶ್ನದ ಮೇಲೆ!!! (ಕಂಟ್ರೋಲ್ ಕಂಟ್ರೋಲ್..!!) ಪ್ರಪಂಚವನ್ನು ಅಧೋಗತಿಗೆ ತಂದಿರುವ, ಮನುಷ್ಯ ತಾನು ಸುಖವಾಗಿ ಇರಲು ಎಂದೂ ಬಿಡದ ಈ ಮೆದುಳನ್ನು ಕಟ್ಟಿಕೊಂಡು ಯಾವ ಪಂಡಗವನ್ನು ಚೇಸ್ಕೋಬೇಕೋ ಗೊತ್ತಿಲ್ಲ...!!

ಮತ್ತೆ ಬದುಕೋದು ಯಾಕೇ?

ಈ ಓಂ ಸಿನಿಮಾ ಸತ್ಯನನ್ನೇ ತಗೋಳೋಣ... ಲವ್ ಸಿಕ್ಕಾಗ ಆದ ಚೇಂಜಸ್ ಈ ರೀತಿ ಡಾಕ್ಯುಮೆಂಟ್ ಆಗಿದೆ... "ಜುಟ್ಟಿಗೇ... ತೈಲವೋ... ಬಟ್ಟೆಗೇ... ಇಸ್ತ್ರಿಯೋ..." (ಇಡೀ ಹಾಡು ಬರೆದು ಬೋರ್ ಮಾಡುವುದಿಲ್ಲ...)

ಮತ್ತೇ... ಆ... ಆಗೋಗಿದೆ ಮಾಯ... ಈ ನನ್ನ ಮುದ್ದಿನ ಹೃದಯ...

ಪ್ರೀತಿ ಎಂದರೆ... ದೇಶದ ಮೇಲೆ, ತಂದೆ ತಾಯಂದಿರ ಮೇಲೆ, ಅಣ್ಣ ತಮ್ಮಂದಿರ ಮೇಲೆ, ಹೆಣ್ಣು/ಗಂಡಿನ ಮೇಲೆ... "ಹೇಳ್ಕೊಳಕ್ ಒಂದೂರು ತಲೇಮ್ಯಾಗ್ ಒಂದ್ ಸೂರು..." ಅನ್ನುವ ಪಾವರ್ಟೀ ಲವ್... ಇವು ಹೈಲೆವೆಲ್ ಆತ್ಮಕ್ಕೆ ಸಂತೋಷ ಕೊಡುವ ಲವ್ಗಳಾದರೆ... ಇಂಗ್ಲೀಶ್ ಲವ್, ಮಾರುತಿ ಕಾರಿನಲ್ಲಿ ಕಷ್ಟ ಪಟ್ಟು ಮಾಡುವ TT ಲವ್ ಕೂಡ ಒಂದು ರೀತಿ ಲವ್ವೇ... (ಗಂಡು/ಗಂಡು ಅಥವ ಹೆಣ್ಣು/ಹೆಣ್ಣು ಕಾಂಬಿನೇಶನ್ ಗೆ ಕೈ ಹಾಕಕ್ ಹೋಗ್ಬೇಡಿ... ಕಾನೂನು ಬಾಹಿರ... ಪೋಲಿಸಿನವರು ಎತ್ತುಹಾಕಿಕೊಂಡು ಹೋಗುತ್ತಾರೆ... ಹೆಂಗಸರಿಗೆ ಲೇಡಿ ಪೋಲೀಸ್ ಮಾಲಾಶ್ರೀ ಝಾಡ್ಸಿದರೆ... ಗಂಡಸರಿಗೆ ಮಾಮಾಶ್ರೀ ಝಾಡಿಸುತ್ತಾರೆ... ಬೀಳುವ ಒದೆಗಳು "ಮಾಲಾಶ್ರೀ... ಮಾಮಾಶ್ರೀ..." ಎಂಬ ಹಾಡಿನ ಬೀಟ್ಸ್ನಂತಿರುತ್ತದೆ...)

Agent Smith: Why, Mr. Anderson? Why do you do it? Why get up? Why keep fighting? Do you believe you're fighting for something? For more than your survival? Can you tell me what it is? Do you even know? Is it freedom? Or truth? Perhaps peace? Yes? No? Could it be for love? Illusions, Mr. Anderson. Vagaries of perception. The temporary constructs of a feeble human intellect trying desperately to justify an existence that is without meaning or purpose. And all of them as artificial as the Matrix itself, although only a human mind could invent something as insipid as love. You must be able to see it, Mr. Anderson. You must know it by now. You can't win. It's pointless to keep fighting. Why, Mr. Anderson? Why? Why do you persist?

Neo: Because I choose to.
(ಮೇಟ್ರಿಕ್ಸ್ ಚಿತ್ರದಿಂದ)

ಮನುಷ್ಯನಿಗೆ ಪ್ರೀತಿ ಹಿಂದೆ ಬಿದ್ದಾಗ ಆಗುವ ಥ್ರಿಲ್... ಪ್ರೀತಿ ಸಿಕ್ಕಾಗ ಸಿಗುವ ಮಜ... "ತನ್ನವಳು/ತನ್ನವನು" ಎಂದು ಇಷ್ಟ ಪಟ್ಟ ವ್ಯಕ್ತಿಯನ್ನು ಅಧಿಕಾರವಾಣಿಯಿಂದ ಹೇಳಿಕೊಳ್ಳುವ ಆನಂದ... ಇದೆಲ್ಲಾ ಮನುಷ್ಯನ "insipid" ಅಥವಾ ಯಾವುದೇ ಸತ್ವವಿಲ್ಲದ ಜೀವಿತಕ್ಕೆ ಸಾರ್ಥಕ್ಯ ಕೊಟ್ಟುಕೊಳ್ಳುವ ಏಕಮಾತ್ರ ಉಪಾಯ... ಈ ಕಿತ್ತುಹೋದ ಜನ್ಮಕ್ಕೆ ಬದುಕಲು ಅರ್ಥ ಕೊಡುವುದೇ ಈ ಪ್ರೀತಿ... ಅದು ಇದೆಯೋ ಅಥವ ಇಲ್ಲವೋ... ಅದು ಬೇಡದ ಮಾತು... ಆದರೆ ಹುಷಾರೂ... "ಪ್ರಿಯತಮಾ... ನಾನು ನಿನ್ನ ಆಶೀರ್ವಾದದಿಂದ ಗರ್ಭವತಿಯಾಗಿದ್ದೇನೆ..." ಎಂದು ಜೋರಾಗಿ ಕಿರುಚಿಕೊಂಡು, "ಹೀಗೆ ಜೋರಾಗಿ ಮಾತಾಡದ್ರೇನೇ ಸಭೀಕರಿಗೆ ಕೇಳೋದೋ, ರಾಗಿ ಮಿಶೀನ್ ಮಂಜ..." ಎಂದು ಹುಡುಗಿ ನಿಮ್ಮ ಹಿಂದೆ ಬೀಳದ ಹಾಗೆ ನೋಡಿಕೊಳ್ಳಿರಿ... ಯಾಕೆಂದರೆ, "ವಿಧಿಯನ್ನು ಗೆಲ್ಲೋನೇ ಮಹಾಶೂರ..."


"हर किसीको नहीं मिलता ये प्यार जिंदगी में... खुश नसीब हैं वो जिनको ये मिला ये बहार जिंदगी में..." ಇದು ಭಾರತದ "ಕ್ಲಿಂಟ್ ಈಸ್ಟ್ ಉಡ್" ಎನಿಸಿಕೊಂಡಿದ್ದ ಫಿರೋಜ್ ಖಾನರ "ಜಾಬಾಜ್" ಎಂಬ ಚಿತ್ರದ ಅಮರ ಗೀತೆ...

ಅದಕ್ಕೆ ನಾನ್ ಹೇಳೋದು...

ಪ್ರೀತಿ ಸಿಗೋದ್ ಕಷ್ಟ... maintain ಮಾಡಿ ಉಳಿಸ್ಕೊಳ್ರೋ... ಕಾಮಿಡಿ ಟೈಂ ಗಣೇಶಂದ್ರಾ...!!!