ಗುರುವಾರ, ಮೇ 1, 2014

ಕದ್ದು ಕೆರೆದ ಕವಿತೆ... ಭಾಗ ಎರಡು...

ನಿನ್ನ ಅನುರಾಗವು ನಿನ್ನ ಹೃದಯದಲ್ಲೇ ನಿದಿರೆ ಹೋಗಿದೆ...
ಆದರೂ ನಿನ್ನ ನೆನೆಯವುದ ನಿಲ್ಲಿಸದೇ ನನ್ನ ತಂಬೂರಿ ನಿನ್ನೇ ನೆನೆದು ಮೌನದಿ ತಾ ಅಳುತಿದೆ...
ನೆಲದ ಮೇಲೆ ಒಂದಿಚಷ್ಟು ಕಣ್ಣೀರು ತುಂಬಿ ನೆಲ ಸಾರಿಸಬೇಕಿದೆ...
ಆದರೂ ನಿನ್ನ ನೆನೆಯವುದ ನಿಲ್ಲಿಸದೇ ನನ್ನ ತಂಬೂರಿ ನಿನ್ನೇ ನೆನೆದು ಮೌನದಿ ತಾ ಅಳುತಿದೆ...

ಬ್ರಷ್ಟವಾಗಿಬಿಟ್ಟ ನಿನ್ನ ಮತಿಗೆ ಯಾರೂ ಬುದ್ಧಿ ಹೇಳಲಿಲ್ಲವೇ?
ನಿನ್ನ ನಿಜವಾದ ಪ್ರೇಮಿ ನಾನೇ ಎಂದೂ ಯಾರೂ ನಿನಗೆ ತಿಳಿ ಹೇಳಲಿಲ್ಲವೇ?
ನನಗೆ ತಿಳಿಯದಾಗಿದೆ... ಆಶ್ಚರ್ಯವಾಗಿದೆ...
ನನ್ನ ಪ್ರೀತಿಗಿಂತ ಹೆಚ್ಚಾಗಿ ಅವರ ಪ್ರಭಾವ ನಿನ್ನ ಮೇಲೆ ಹೇಗೆ ಆಗಿದೆ...?
ನನಗೆ ತಿಳಿಯದಾಗಿದೆ...
ಜೀವನದ ಪಾಠ ಈಗ ಕಲಿತು ಮನವು ಪಕ್ವವಾಗಿದೆ...
ಆದರೂ ನಿನ್ನ ನೆನೆಯವುದ ನಿಲ್ಲಿಸದೇ ನನ್ನ ತಂಬೂರಿ ನಿನ್ನೇ ನೆನೆದು ಮೌನದಿ ತಾ ಅಳುತಿದೆ...

ವಿಚಲಿತಳು ಹೇಗಾದೆ? ವಿಕೃತಳು ನೀ ಹೇಗಾದೆ? ಸ್ವಾರ್ಥಿಯು ನೀ ಯಾಕಾದೆ?
ಉತ್ತರ ಯಾರಿಗೆ ಬೇಕಿದೆ?
ಭೂಮಿಯು ತಿರುಗುತ್ತಲೇ ಇದೆ... ಸೂರ್ಯನ ಹುಟ್ಟು ಮರುಹುಟ್ಟುಗಳಾಗುತ್ತಲೇ ಇದೆ...
ಆದರೂ ನಿನ್ನ ನೆನೆಯವುದ ನಿಲ್ಲಿಸದೇ ನನ್ನ ತಂಬೂರಿ ನಿನ್ನೇ ನೆನೆದು ಮೌನದಿ ತಾ ಅಳುತಿದೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ