ಮಂಗಳವಾರ, ಮೇ 19, 2015

ಪ್ರೇಮದ ಇರುವಿಕೆಯ ಅರಿವು ಇರದಿದ್ದಾಗ...

ಲವ್ ಅಂದ್ರೆ ನಿಜವಾಗ್ಲೂ ಏನು...? ನಮಗೆ ಕಾಣೋದೆಲ್ಲಾ ಕೇಳೋದೆಲ್ಲಾ ಸತ್ಯಾನಾ...  ಅಥವಾ ಮೌನವೇನೇ ಧ್ಯಾನವೇ ಪ್ರೇಮಾನಾ...? ಲೈಫ್ ಪ್ರಶ್ನೆ ಬಂದಾಗ... ವಿಷಯಗಳು ಸಿರಿಯಸ್ಸಾಗಿರೋವಾಗ ಬರೋ ಅನುಭವ ಮಾತ್ರ ಪ್ರೇಮಾನಾ...? ಅಥವಾ ಮಜದಲ್ಲಿದ್ದಾಗ ಬಣ್ಣದ್ ಮಾತಾಡೋದೇ ಪ್ರೇಮಾನಾ...? ಲವ್ ಅಂದ್ರೆ ನನ್ ಅನುಭವಕ್ಕೆ ಬಂದ ವಿಷಯ ಇದ್ಯಾವುದೂ ಅಲ್ಲಾ... ಲವ್ ಅಂದರೆ ಅನಿವಾರ್ಯತೆ... ಬೇಕೋ ಬೇಡವೋ ಬೇಕಾದೋರಿಗೆ ಬದುಕೋದೇ ಲವ್... ಅವಳ ನೆನಪು ಕಾಡೋದಲ್ಲಾ... ಅವಳ ಇರುವಿಕೆಯನ್ನ ತೀರಾ ಸಲೀಸಾಗಿ ತಗೊಂಡು ಅವಳ ನೆನಪೇ ಆಗ್ದೇಯಿರೋದು ನಿಜವಾದ ಲವ್... ಲವ್ವಲ್ ಇದ್ರೂನೂ ಸಿಂಗಲ್ಲಾಗಿರೋ ಅನುಭವ ಸಿಗುವ ಫ್ರೀಡಮ್ಮೇ ಲವ್... ಲವ್ವನ್ನು ತೋರಿಸುವ ಬಾಬತ್ತಿಲ್ಲದೇ ಇರುವ ಸಖತ್ತಾಗಿರೋ ಅನುಭವವೇ ಲವ್... ಪ್ರೇಮದ ಇರುವಿಕೆಯ ಅರಿವೇ ಇರದಿರುವಂತೆ ಇರುವ ಪ್ರೇಮ ನಿಜವಾದ ಲವ್... ಕುಡಿದಾಗ ಕೂಡ ಆಕೆಗೆ ಫೋನ್ ಮಾಡದೇ ಇರುವುದು... ಆಕೆಯ ನೆನಪಾಗದಿರುವುದು... ನಾನು ಅವಳ ಮೇಲೆ ಎಷ್ಟು ಲವ್ ಇಟ್ಟಿದ್ದೇನೆ ಎಂದು ನನಗೆ ಮನವರಿಕೆ ಮಾಡಿತು... ಆಕೆಯ ಇರುವಿಕೆ ಅಷ್ಟು ಸಲೀಸಾಗಿಬಿಟ್ಟಿದೆ ನನಗೆ... ಲವ್ವಲ್ಲಿಲ್ಲದೇ ಇರುವಾಗ ಲವ್ ನನ್ನ ಜೀವನದಲ್ಲಿ ಅನುಭವಕ್ಕೇ ಬರಲಿಲ್ಲಾ ಎಂದು ಪರಿತಪಿಸುತ್ತಿದ್ದ ಕಾಲದಲ್ಲಿ ಆಕೆ ನನಗೆ ಸಿಕ್ಕಾಗ ರೋಮಾಂಚನವಾಗಲಿಲ್ಲಾ... ಪುಳಕವಾಗಲಿಲ್ಲಾ... ಮಣ್ಣು-ಮಸಿ ಇತ್ಯಾದಿ ಯಾವುದೂ ಆಗಲಿಲ್ಲಾ... ಆಕೆ ಎಂದಿನಿಂದಲೋ ನನ್ನ ಜೊತೆಗೇ ಇದ್ದಾಳೆ ಎಂಬ ಟೇಕನ್ ಫಾರ್ ಗ್ರಾಂಟೆಡ್ ಭಾವ... ಈ ಭಾವಕ್ಕೆ ಹೆಸರಿನ ಹಂಗು ಬೇಕಾದರೆ ಅದನ್ನು ಲವ್ ಅಂತ ಕರೀಯೋಂಗಿದ್ರೆ ಕರ್ಕೊಳಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ