ಶನಿವಾರ, ಮೇ 4, 2013

ಕೆಟ್ಹೋದೇ ನಾನ್ ಕೆಟ್ಹೋದೇ



೯ ನೇ ಕ್ಲಾಸ್ ತನಕ ಒಂದ್ ದಿನಾ ಕೂಡ ಸ್ಕೂಲಿಗೆ "ಬಂಕ್" ಹೊಡೆದಿರ್ಲಿಲ್ಲಾ ನಾನು... ವರ್ಷ ೧೯೯೯ ಅನ್ಸುತ್ತೆ... ಅವನೇ ಹೀರೋ ಆಗಿ, ಅವನೇ ಡೈರೆಕ್ಟರ್ ಆಗಿ, ಆ ಸಿನಿಮಾಗೆ ಅವನೇ ಅವನ್ ಹೆಸ್ರೇ ಇಟ್ಕೊಂಡ ಒಬ್ಬ ಭೂಪನ ಸಿನಿಮಾ ರಿಲೀಸ್ ಆಗಿತ್ತು... ಆಗ್ತಾನೇ ಯೂತಿನ ಹೊಸ್ತಿಲಲ್ಲಿದ್ದ ನನಗೆ ಆ ಭೂಪನ ಸಿನಿಮಾ ಅಂದ್ರೆ ಏನೋ ಕ್ಯೂರಿಯಾಸಿಟಿ... ಆ ವಯ್ಯನ "A" ಸಿನಿಮಾ ನೋಡದ್ಮೇಲಂತೂ ಏನೋ ಕಿತ್ಹಾಕ್ತಾನೇ... ಏನೋ ದಬ್ಹಾಕ್ತಾನೇ... ಏನೋ ಕಡದ್ ಗುಡ್ಡೇ ಹಾಕ್ತಾನೇ... ಅಂತ ಅವನ್ ಮೇಲೆ ಫುಲ್ ಹೋಪ್ಸು...  ಆಗ್ತಾನೇ ಕೇಬಲ್ ಕೂಡ ಹಾಕ್ಸಿದ್ರು ಮನೇನಲ್ಲಿ... ಇರೋ ಬರೋ ಇಂಗ್ಲೀಶ್ ಚಾನಲ್ಲೆಲ್ಲಾ ನೋಡ್ಕೊಂಡು, "ನನ್ಮಗಂದು ಕನ್ನಡ್ದಲ್ ಹೀಗ್ ಮಾಡದ್ರೆ ಹೇಗ್ ಇರುತ್ತೇ...?" ಅಂತ ತಲೆಯಲ್ಲಿ ನೂರಾರ್ ಥಾಟ್ಸೂ... ಥಾಟ್ಸು...
ನಾನು ಮತ್ತೆ ನನ್ ಹೃದಯ ಗೆದ್ದ ಗೆಳೆಯ ಹೊರಟೇ ಬಿಟ್ವಿ ಅವತ್ತು... ಜೀವನದಲ್ಲಿ ಹಾಕಿದ ಮೊದಲ ಬಂಕ್ ಅದು... ಥೀಯೇಟ್ರಲ್ ಕೂತು ಆ ಸಿನಿಮಾ ನೋಡ್ತಾ ನೋಡ್ತಾ ನೋಡ್ತಾ... "ಎತ್ತಣಿಂದೆತ್ತ ಸಂಬಂಧವಯ್ಯ" ಅನ್ನೋ ರೀತಿನಲ್ಲಿ ನನ್ ಟೊಳ್ಳು ಬುರುಡೇ ಒಳಗೆ ಆ ಹುಚ್ಚು ಕಥೆಗೂ ಅದ್ವೇತದ್ Non-dual philosophyಗೂ ಗೋಕ್ಲಾಷ್ಟ್ಮೀ ಇಮಾಮ್ ಸಾಬೀ ಸಂಬಂಧ ಕಲ್ಪಸ್ಕೊಳಕ್ ಶುರುವಾಯ್ತು... ಆಮೇಲ್ ಗೊತ್ತಾಯ್ತು ಅದ್ವೇತ ಅಂದ್ರೆ ಏನೂ ಅಂತಾನೇ ಗೊತ್ತಿರ್ಲಿಲ್ಲ ನಂಗೆ ಅಂತ... ಆಗ ಕಾಡಿತು ನೋಡಿ ಮನುಷ್ಯನಿಗೆ Lifeಅಲ್ಲಿ at any point of time ತಲೆಗೆ ಹುಳ ಬಿಡುವ fundamental philosophical question, "ನಾನು ಯಾರು...?"
ಅತಿ ಶೀಘ್ರದಲ್ಲಿ ನಮಗೆ ವೇದ್ಯವಾದ ವಿಷಯವೇನೆಂದರೆ, "ನನ್ಮಗಂದು ದೇವರಾಣೆಗೂ ನನಗೆ ಏನೂ ಗೊತ್ತಿಲ್ಲ... ಇನ್ಮೇಲಿಂದ ನಾನು ಚೈಲ್ಡಾಗ್ ಉಳಿದಿಲ್ಲ ಅದಕ್ಕೆ ನಾನು... ಏಳಬೇಕು... ಎದ್ದು ನಿಗುರಬೇಕು... ಅಲ್ಲಲ್ಲ ಎದ್ದೇಳಬೇಕು... ವಿಷಯಗಳನ್ನ ತಿಳ್ಕೋಬೇಕೂ, ಟೆಕ್ಸ್ಟ್ ಬುಕ್ ಬಿಟ್ಟು ಬೇರೆ ಪುಸ್ತಕಗಳು ಓದಬೇಕು, ಬೇರೆಯವರ್ ಮುಂದೆ ಸ್ಕೋಪ್ ತಗೋಳಕ್ಕಾದ್ರೂ ವಿಷಯಗಳು ಗೊತ್ತಿರ್ಬೇಕು... ಮಾತಾಡು ಸಾಕು, ಮೌನ ಬಿಸಾಕು, ಹೋರಾಡುವಾ ದಿಲ್ಲಿದೆ, ಹುಡುಕಾಡುವ ಧಮ್ಮಿದೆ, ತಿಳ್ಕೊಳೋದು ಬೇಕಾದಷ್ಟಿದೆ.
ಈ ಯೋಚನೆ ತಲೇನಲ್ಲಿ ಬಂದು ಕೂತ್ಕೋತೂ ನೋಡಿ... ಅವತ್ತಿಂದ "ಕೆಟ್ಹೋದೇ ನಾನ್ ಕೆಟ್ಹೋದೇ..."
ಅದು ಹೋಗ್ಲಿ, ಪೂರ್ಣಚಂದ್ರ ಕಶ್ಯಪ ಅನ್ನೋದು ಈ ಲೋಕದಲ್ಲಿ ನಾನು ವ್ಯವಹರಿಸಲು ಇಟ್ಟಿರುವ ಹೆಸರು... ಪಾರಮಾರ್ಥಿಕ view point ತಗೊಂಡ್ರೆ ನಾನು ಯಾರು? ಎಲ್ಲಿಂದ ಬಂದೆ? ನನ್ ಹೆಸರೇನೂ? ಏನೂ ಗೊತ್ತಿಲ್ಲ... ತಿಳಿದೋರೊಬ್ಬರನ್ನ ಕೇಳ್ದೇ... ಅವರ್ ಹೇಳಿದ್ ಇಷ್ಟೇ... "ನಿನ್ ತಲೇಗೆ ಆ ಪ್ರಶ್ನೆ ಹೊಳಿಯೋಕ್ಕೆ ನೂರಾರ್ ಜನ್ಮದ್ ಕರ್ಮದ್ ಶೇಷ ಇರಬೇಕು... ಹೊಳೆದಿದೆ congrats... ನಿನ್ ಪ್ರಶ್ನೇಗೆ answer ಸಿಗ್ಬೇಕಾದ್ರೆ ಇನ್ನೂ ನೂರಾರ್ ಜನ್ಮಗಳು ಕಳೆದು ಅನುಭವಿಸಬೇಕಾದದ್ದನ್ನೆಲ್ಲಾ ಅನುಭವಿಸಿ wear and tear ಆಗ್ಬೇಕು..." ಅಂತ...
ನಾನು ಅವರ್ ಮಾತನ್ ನಂಬ್ತೀನಿ...



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ