ಆಟಂ ಬಾಂಬ್ನ ಕೈಯಲ್ ಹಿಡಿಯೋಕ್ಕೂ ಸಿದ್ಧ
ಬ್ಲೇಡಲ್ ಕೈ ಕುಯ್ಕೊಳಕ್ಕೂ ಸಿದ್ಧ
ನಿನಗಾಗಿ ಏನೇನ್ ಮಾಡೋಕ್ಕೂ ಸಿದ್ಧ
ನಾ ಎಲ್ಲಾ ನೋವ ನುಂಗುವೆ
ಗನ್ನಗ್ ಕೂಡ ಎದೆಯೊಡ್ಡುವೆ
ನಿನಗಾಗಿ ಸಾಯುವೆ ಚೆವುವೆ
ಆದ್ರೇ ಇದೇ ಭಾವನೆ ನಿನಗೆ ನನ್ ಮೇಲ್ ಇಲ್ಲ...
ನಾನು ಬೆಂಕೀಲಿ ಸುಡ್ತಾಯಿದ್ರೆ
ದೋರ್ದಲ್ ನಿಂತ್ ನೋಡ್ ನಗ್ತೀಯ
ನಾ ಮೂಲೇಲ್ ಅಳ್ತಾಯಿದ್ರೆ
ನೀ ಕ್ಯಾರೆ ಅಂದಲೆ ಹೋಗ್ತೀಯ
ಆದ್ರೆ ನೀನೆಂದಿಗೂ ನನ್ನ ದೇವತೆ
ನನ್ನ ಕುರುಡು ಹೃದಯಕ್ಕೆ ನೀನೇ ಬೇಕು
ಆದ್ರೆ ನಾನೇ ಬೇಕು ಅಂತ ನಿಂಗ್ಯಾವತ್ತೂ ಅನ್ಸಿಲ್ಲ...
ನಾ ಉರೀತಿದ್ರೆ ನಿಂತ್ ನೋಡು ಪರ್ವಾಗಿಲ್ಲ
ಆ ನೋವಿನಲ್ಲೂ ಹಿತವಿದೆ
i love u ಅಂತ ಸುಳ್ ಹೇಳು ಪರ್ವಾಗಿಲ್ಲ
ಆ ಸುಳ್ಳಿನಲ್ಲೂ ಮಜವಿದೆ
ಎಲ್ಲಾ ಕಡೇ ನಂಗ್ ನೀನೇ ಕಾಣ್ತಾಯಿದ್ಯಾ
ನನ್ ಕೈಯಲ್ಲಿರೋ ಬಾಟ್ಲೀಲಿ ಕೂಡ ನಿನ್ನ ಬಿಂಬವಿದೆ!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ